Call Us Now: 08272 221717

ಪಣಪಿಲ: ಪಿಯುಸಿ ಸಾಧಕ ವಿದ್ಯಾರ್ಥಿನಿಯರಿಗೆ ಶಾಸಕರಿಂದ‌ ಸನ್ಮಾನ

July 31, 2020

ಮೂಡುಬಿದಿರೆ: ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಮೂಲ್ಯವಾದ ಶಿಕ್ಷಣವನ್ನು ಪಡೆದುಕೊಂಡು ಉತ್ತಮ ಸಾಧನೆ ನಡೆಸಿ ಊರಿಗೆ ಮತ್ತು ಮನೆಯವರಿಗೆ ಉತ್ತಮ ಹೆಸರನ್ನು ತಂದುಕೊಡಬೇಕು ಎಂದು ಶಾಸಕ ಉಮಾನಾಥ ಕೋಟ್ಯಾನ್ ಕರೆಯಿತ್ತರು.

ದರೆಗುಡ್ಡೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪಣಪಿಲ ಗ್ರಾಮದ ಮಿತ್ತಕಲ್ಪನೆಗೆ ಜು. 27ರಂದು ಅವರು ಭೇಟಿ ನೀಡಿ ಪಿಯುಸಿ ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಶುಭ ಹಾರೈಸಿದರು.

ಪಿಯುಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಮಟ್ಟದಲ್ಲಿ 10ನೇ ಸ್ಥಾನ ಪಡೆದ ಅಂಕಿತಾ, 96ಶೇ. ಅಂಕ ಪಡೆದುಕೊಂಡಿರುವ ಜಾಯ್ಲಿನ್ ಅಶುಂತಾ ಡಿಸೋಜ, 90.3ಶೇ. ಅಂಕ ಪಡೆದಿರುವ ಶ್ರೇಯಾ ಶೆಟ್ಟಿ, 85ಶೇ. ಅಂಕ ಪಡೆದಿರುವ ದೀಕ್ಷಾ ಹಾಗೂ ವಿಜ್ಞಾನ ವಿಭಾಗದಲ್ಲಿ 92.3ಶೇ. ಅಂಕ ಗಳಿಸಿರುವ ಹರ್ಷಿತಾ ಅವರನ್ನು ಶಾಲು ಗೌರವಿಸಿದರು.

ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ದರೆಗುಡ್ಡೆ ಪಂಚಾಯತ್ ಮಾಜಿ ಉಪಾಧ್ಯಕ್ಷ ಮುನಿರಾಜ ಹೆಗ್ಡೆ, ಮಾಜಿ ಸದಸ್ಯ ಸಂತೋಷ್ ಪೂಜಾರಿ, ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಅಶ್ವಥ್ ಪಣಪಿಲ, ಪಕ್ಷದ ಪ್ರಮುಖ ಸುನಿಲ್ ಪಣಪಿಲ, ಮೂಡುಬಿದಿರೆ ಮಂಡಲ ಕಾರ್ಯದರ್ಶಿ ಸಂತೋಷ್ ಶೆಟ್ಟಿ, ಮೂಡುಬಿದಿರೆ ಶಕ್ತಿಕೇಂದ್ರದ ಕಾರ್ಯದರ್ಶಿ ದಿವ್ಯವರ್ಮ ಜೈನ್, ಶಿರ್ತಾಡಿ ಶಕ್ತಿಕೇಂದ್ರದ ಉಪಾಧ್ಯಕ್ಷ ಶರತ್ ಶೆಟ್ಟಿ, ಸ್ಥಾನೀಯ ಸಮಿತಿಯ ಅಧ್ಯಕ್ಷ ದೀಕ್ಷಿತ್ ಪಣಪಿಲ, ಪ್ರಧಾನ ಕಾರ್ಯದರ್ಶಿ ಸಚಿನ್ ಪಣಪಿಲ, ಭಜರಂಗದಳ ಸಂಚಾಲಕ ಹರೀಶ್ ಪಣಪಿಲ, ಮಹಾವೀರ ಪಣಪಿಲ ಹಾಗೂ ವಿದ್ಯಾರ್ಥಿಗಳ ಹೆತ್ತವರು ಉಪಸ್ಥಿತರಿದ್ದರು.