Call Us Now: 08272 221717

ರಕ್ಷಬಂಧನಲ್ಲಿ ಚಿಗುರುತ್ತದೆ ಗಿಡ: ಪೇಪರ್ ಸೀಡ್ ಸಂಸ್ಥೆಯ ಪರಿಸರಸ್ನೇಹಿ ನಡೆ

July 25, 2020

ಕಿನ್ನಿಗೋಳಿ: ಪರಿಸರಸ್ನೇಹಿ ಉತ್ಪನ್ನಗಳ ಮೂಲಕ ಸಾಮಾಜಿಕ ಸೇವೆಯನ್ನು ಮಾಡುತ್ತಿರುವ ಕಿನ್ನಿಗೋಳಿ ಸಮೀಪದ ಪಕ್ಷಿಕೆರೆಯ ಪೇಪರ್‌ಸೀಡ್ ಸಂಸ್ಥೆ ಈ ವರ್ಷದ ರಕ್ಷಬಂಧನಕ್ಕೆ ವಿನೂತನ ಪ್ರಯೋಗವೊಂದನ್ನು ಮಾಡಿದೆ ರಕ್ಷಬಂಧನ ಸಸಿ ಚಿಗುರಿಸುವ ಮೂಲಕ ಹೊಸ ಹೆಜ್ಜೆಯನ್ನಿರಿಸಿದ್ದು, ಪರಿಸರ ಜಾಗೃತಿಯನ್ನು ಮೂಡಿಸುತ್ತಿದೆ.

ಪರಿಸರಕ್ಕೆ ರಕ್ಷೆ:
ಪೇಪರ್‌ಸೀಡ್ ಸಂಸ್ಥೆಯು ಈ ಬಾರಿ ರಕ್ಷಬಂಧನದ ಸಂಭ್ರಮಕ್ಕೆ ಹೊಸ ರೂಪು ನೀಡಿದ್ದು, ಮೂರು ರೀತಿಯಲ್ಲಿ ಪರಿಸರ ಸ್ನೇಹಿ ರಕ್ಷಬಂಧನಗಳನ್ನು ತಯಾರಿಸಿದೆ. ಹಳೇ ನ್ಯೂಸ್ ಪೇಪರ್‌ಗಳ ಪಲ್ಪ್ ಮಾಡಿ, ಅದರೊಳಗೆ ಬೀಜವಿರಿಸಿ ರಕ್ಷಬಂಧನ ತಯಾರಿಸಿದೆ. ಆವೆ ಮಣ್ಣನಿಂದಲೂ ಇದೇ ರೀತಿ ರಕ್ಷಾಬಂಧನವನ್ನು ತಯಾರಿಸಿದ್ದು, ರಕ್ಷಬಂಧನವನ್ನು ಉಪಯೋಗಿಸಿ ಆ ಬಳಿಕ ಮಣ್ಣಿನಲ್ಲಿ ಹಾಕಿದರೆ ಗಿಡ ಚಿಗುರುತ್ತದೆ. ಪರಿಸರಕ್ಕೆ ಪೂರಕವಾದ ಈ ಪ್ರಯತ್ನದ ಮುಖಾಂತರ ಬೀಜವೊಂದು ಚಿಗುರೊಡೆದು, ಜೀವ ತಳೆಯುವುದರಿಂದ ಸಹೋದರ ಸಹೋದರಿ ಸಂಬAಧವು ಮತ್ತಷ್ಟು ಭಾವನಾತ್ಮಕವಾಗುವುದರಲ್ಲಿ ಸಂಶಯವಿಲ್ಲ. ರಕ್ಷಬಂಧನಕ್ಕೆ ಶುಭಕೋರುವ ಪೇಪರ್‌ಸೀಡ್ ಗ್ರೀಟಿಂಗ್ಸ್ ಅನ್ನು ಕೂಡ ಸಂಸ್ಥೆಯು ತಯಾರಿಸಿದ್ದು, ಅದನ್ನು ಉಪಯೋಗಿಸಿದ ಬಳಿಕ, ಮಣ್ಣಿನಲ್ಲಿ ಸೇರಿಸಿದರೆ ಗ್ರೀಟಿಂಗ್ಸ್ ಕಾರ್ಡ್ಗಳಿಂದಲೂ ಗಿಡ ಚಿಗುರೊಡೆಯುತ್ತದೆ.

ಪರಿಸರಸ್ನೇಹಿ ರಾಷ್ಟ್ರಧ್ವಜ
ಪೇಪರ್‌ಸೀಡ್ ಸಂಸ್ಥೆಯು ಕಳೆದ ವರ್ಷ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿನ ಪರಿಸರಸ್ನೇಹಿ ರಾಷ್ಟಧ್ವಜವನ್ನು ತಯಾರಿಸಿದ್ದು, ರಾಷ್ಟ್ರಮಟ್ಟದಲ್ಲಿ ಸಂಸ್ಥೆಯ ಪ್ರಯತ್ನಕ್ಕೆ ಮನ್ನಣೆ ಸಿಕ್ಕಿದೆ. ತೆಂಗಿನಕಾಯಿ ಚಿಪ್ಪನ್ನು ಬಳಸಿ ಅಭರಣಗಳನ್ನು ತಯಾರಿಸುವ ಮತ್ತೊಂದು ಪ್ರಯತ್ನವನ್ನು ಪೇಪರ್‌ಸೀಡ್ ಸಂಸ್ಥೆ ಮಾಡುತ್ತಿದೆ. 2017ರಲ್ಲಿ ಸ್ಥಾಪನೆಯಾಗಿ, 2019ರಿಂದ ಹೆಚ್ಚು ಪ್ರಚಾರದಲ್ಲಿರುವ ಈ ಸಂಸ್ಥೆಯು ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಸೃಷ್ಟಿಸುವ ಕೆಲಸವನ್ನು ಮಾಡುತ್ತಿದೆ. ಪರಿಸರ ಸಂರಕ್ಷಣೆಗೆ ಪೂರಕವಾಗಿ ಕೈಯಿಂದಲೇ ತಯಾರಿಸಿದ ಪರಿಸರಸ್ನೇಹಿ ಉತ್ಪನ್ನಗಳನ್ನು ತಯಾರಿಸುವಲ್ಲಿ ಈ ಸಂಸ್ಥೆ ಮುಂಚೂಣಿಯಲ್ಲಿದೆ. ಕಳೆದ ವರ್ಷ ಪೇಪರ್ ಪಲ್ಪ್ನಿಂದ ಗಣೇಶನ ಮೂರ್ತಿಯನ್ನೂ ತಯಾರಿಸಿದೆ. ಕ್ರಿಸ್ಮಸ್ ಸಂದರ್ಭದಲ್ಲಿ ಚೈನಾ ಅಲಂಕಾರಿಕ ವಸ್ತುಗಳು ಹೆಚ್ಚು ಬಳಕೆಯಾಗುತ್ತಿದ್ದು, ಇದನ್ನು ತಡೆಯಲು ಪೇಪರ್ ಮೂಲಕ ಪರಿಸರಸ್ನೇಹಿ ಅಲಂಕಾರಿ ವಸ್ತುಗಳನ್ನು ಕೂಡ ಸಂಸ್ಥೆ ತಯಾರಿಸಿದೆ. ಹಳೇಯ ನ್ಯೂಸ್ ಪೇಪರ್‌ಗಳನ್ನು ಬಳಸಿ ಪೆನ್ನು, ಪೆನ್ಸಿಲ್‌ಗಳನ್ನೂ ಸಂಸ್ಥೆ ತಯಾರಿಸಿದೆ.

ಸಾಮಾಜಿಕ ಬದ್ಧತೆಯಿಂದ ನಮ್ಮ ಸಂಸ್ಥೆ ಕೆಲಸ ಮಾಡುತ್ತಿದೆ. ನಾವು ಕೊರಗ ಜನಾಂಗ ಸಹಿತ ಕರಕುಶಲ ವಸ್ತುಗಳನ್ನು ತಯಾರಿಸುವ ವರ್ಗಕ್ಕೆ ಕೂಡ ಸಪೋರ್ಟ್ ಮಾಡುತ್ತಿದ್ದೇವೆ. ಅವರಿಂದ ವಸ್ತುಗಳನ್ನು ಖರೀದಿಸಿ ಗ್ರಾಹಕರಿಗೆ ತಲುಪಿಸುವ ಕೆಲಸವನ್ನು ಮಾಡುತ್ತಿದೆ. ಪಾಸ್ಟಿಕ್‌ಮುಕ್ತ ಚಿಂತನೆಗೆ ಪೂರಕವಾಗಿ ಪರಿಸರ ಸ್ನೇಹಿ ಸ್ವದೇಶಿ ಉತ್ಪನ್ನಗಳನ್ನು ತಯಾರಿಸುತ್ತಿರುವುದರಿಂದ ವಿವಿಧ ಭಾಗಗಳ ಪರಿಸರಸ್ನೇಹಿ ಗ್ರಾಹಕರು, ಎನ್‌ಜಿಒಗಳಿಗೆ ನಮ್ಮ ಸಂಸ್ಥೆಯು ಪ್ರೀತಿ ಪಾತ್ರವಾಗಿದೆ. ಕರಕುಶಲವಸ್ತುಗಳ ಮೂಲಕ ಗ್ರಾಮೀಣ ಪ್ರದೇಶದ ಜನರಿಗೆ ಉದ್ಯೋಗ ಕಲ್ಪಿಸುವ ನಮ್ಮ ಸಂಸ್ಥೆಗೆ ಜನರು ಬೆಂಬಲ ಸದಾ ಇರಲಿ.

-ನಿತಿನ್ ವಾಸ್, ಸಂಸ್ಥಾಪಕರು, ಪೇಪರ್‌ಸೀಡ್ ಸಂಸ್ಥೆ