Call Us Now: 08272 221717

ಪಡುಮಾರ್ನಾಡು ನರೇಗಾ ಅವ್ಯವಹಾರ ದೂರು: ಒಂಬುಡ್ಸ್ಮೆನ್ ಪರಿಶೀಲನೆ

June 11, 2020

ಮೂಡುಬಿದಿರೆ : ಪಡುಮಾರ್ನಾಡು ಗ್ರಾಪಂನಲ್ಲಿ ನರೇಗಾ ಯೋಜನೆಯಡಿ ಸುಮಾರು ೧೦ ಲಕ್ಷ ರೂ. ವೆಚ್ಚದಲ್ಲಿ ವಿವಿಧ ಕಾಮಗಾರಿಗಳನ್ನು ಗುತ್ತಿಗೆದಾರರ ಮೂಲಕ ಯಂತ್ರೋಪಕರಣ ಬಳಸಿ ನಡೆಸುತ್ತಿದ್ದು, ಇದರಲ್ಲಿ ಅವ್ಯವಹಾರ ನಡೆದಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಮಹಮ್ಮದ್ ಅಸ್ಲಾಂ ಜಿಲ್ಲಾ ಎನ್‌ಆರ್‌ಜಿ ಒಂಬುಡ್ಸ್ಮೆನ್ ಅವರಿಗೆ ದೂರು ಸಲ್ಲಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಜಿಲ್ಲಾ ಒಂಬುಡ್ಸ್ಮೆನ್ ರಾಮದಾಸ ಗೌಡ ಮಂಗಳವಾರ ಕಾಮಗಾರಿ ನಡೆದ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅಲ್ಲಿದ್ದ ಕಾರ್ಮಿಕರಿಂದ ಮಾಹಿತಿ ಸಂಗ್ರಹಿಸಿದರು. ಈ ಬಗ್ಗೆ ತನಿಖೆ ನಡೆಯುತ್ತಿರುವುದರಿಂದ ಕಾಮಗಾರಿ ಸ್ಥಗಿತಗೊಳಿಸುವಂತೆ ಸೂಚಿಸಿದರು.
ದೂರುದಾರ ಮಹಮ್ಮದ್ ಅಸ್ಲಾಂ, ಮಾಜಿ ಉಪಾಧ್ಯಕ್ಷ ಸತೀಶ್ ಕರ್ಕೇರಾ ಉಪಸ್ಥಿತರಿದ್ದರು.