Call Us Now: 08272 221717

ಮೂಡುಬಿದಿರೆ: ಪೊಲೀಸ್ ಠಾಣೆ ಹಳೆ ಕಟ್ಟಡಕ್ಕೆ ಕಡೆಗೂ ಮುಕ್ತಿ

July 22, 2020

ಮೂಡುಬಿದಿರೆ: ಪೇಟೆಯಲ್ಲಿ ಹಲವಾರು ವರ್ಷಗಳಿಂದ ಪಾಳು ಬಿದ್ದಿದ್ದ ಮೂಡುಬಿದಿರೆ ಪೊಲೀಸ್ ಠಾಣೆಯ ಹಳೇ ಕಟ್ಟಡಕ್ಕೆ ಕಡೆಗೂ ಮುಕ್ತಿ ಸಿಕ್ಕಿದೆ. ಮೂಡುಬಿದಿರೆ ಪೊಲೀಸ್ ನಿರ್ದೇಶನದಂತೆ ಮಂಗಳವಾರ ರಾತ್ರಿ ತೆರವುಗೊಳಿಸಲಾಗಿದೆ.

ಮುಖ್ಯರಸ್ತೆ ಪಕ್ಕದಲ್ಲಿ, ಬೆಳ್ತಂಗಡಿ, ಬಂಟ್ವಾಳ ರಾಜ್ಯ ಹೆದ್ದಾರಿ ಹಾಗೂ ಕಾರ್ಕಳ ರಾಷ್ಟ್ರೀಯ ಹೆದ್ದಾರಿಯನ್ನು ಮೂಡುಬಿದಿರೆ ಪೇಟೆಗೆ ಸಂಪರ್ಕಿಸುವ ಇಕ್ಕಟ್ಟಾದ ಪ್ರದೇಶದಲ್ಲಿ ಈ ಹಳೇ ಕಟ್ಟಡವಿತ್ತು. ಟ್ರಾಫಿಕ್ ಸಮಸ್ಯೆ ಮತ್ತು ಘನ ವಾಹನಗಳು ಟರ್ನ್ ಮಾಡಲು ಕಷ್ಟವಾಗುತ್ತಿತು.