Call Us Now: 08272 221717

ಮೂಡುಬಿದಿರೆಯ ಛಾಯಾಗ್ರಾಹಕರಿಗೆ ಆಹಾರ ಕಿಟ್ ವಿತರಣೆ

June 12, 2020

ಮೂಡುಬಿದಿರೆ : ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದ ಸೌತ್‌ಕೆನರಾ ಪೋಟೋಗ್ರಾರ‍್ಸ್ ಎಸೋಸಿಯೇಶನ್ ಮೂಡುಬಿದಿರೆ ವಲಯ ಇದರ 70 ಮಂದಿ ಸದಸ್ಯರಿಗೆ ಶಾಸಕ ಉಮಾನಾಥ ಕೋಟ್ಯಾನ್ ಶುಕ್ರವಾರ ಸಮಾಜ ಮಂದಿರದಲ್ಲಿ ಆಹಾರ ಕಿಟ್ ವಿತರಿಸಿದರು.
ಜಿ.ಪಂ.ಸದಸ್ಯ ಕೆ.ಪಿ. ಸುಚರಿತ ಶೆಟ್ಟಿ, ಪುರಸಭಾ ಸದಸ್ಯರಾದ ರಾಜೇಶ್ ನಾಯ್ಕ್, ನವೀನ್ ಶೆಟ್ಟಿ, ಛಾಯಾಗ್ರಾಹಕರ ಸಂಘದ ಗೌರವಾಧ್ಯಕ್ಷ ಭಾನುಪ್ರಕಾಶ್ ರಾವ್, ಅಧ್ಯಕ್ಷ ರವಿ ಕೋಟ್ಯಾನ್, ಕಾರ್ಯದರ್ಶಿ ನಿತಿನ್ ಬೆಳುವಾಯಿ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸುಕೇಶ್ ಶೆಟ್ಟಿ, ಮಂಡಲ ಪ್ರ. ಕಾರ್ಯದರ್ಶಿ ಗೋಪಾಲ ಶೆಟ್ಟಿಗಾರ್ ಮೊದಲಾದವರು ಉಪಸ್ಥಿತರಿದ್ದರು.