Call Us Now: 08272 221717

ರೋಟರಿ ಟಂಪಲ್ ಟೌನ್ ನಿಂದ ರಕ್ತದಾನ ಶಿಬಿರ

July 4, 2020

ಮೂಡುಬಿದಿರೆ : ಮಳೆಗಾಲದಲ್ಲಿ ಡೆಂಗ್ಯೂ ಮಲೇರಿಯಾ ಮತ್ತಿತರ ಕಾಯಿಲೆಗಳು ವ್ಯಾಪಕವಾಗಿ ಹರಡುತ್ತಿರುವುದರಿಂದ ರೋಗಿಗಳ ಸಂಖ್ಯೆ ಹೆಚ್ಚುತ್ತಿದ್ದು ಬ್ಲಡ್ ಬ್ಯಾಂಕ್‍ಗಳಲ್ಲಿ ರಕ್ತದ ಕೊರತೆಯಿದೆ. ರಕ್ತದಾನಿಗಳು ರಕ್ತನೀಡುವ ಮೂಲಕ ಈ ಕೊರತೆಯನ್ನು ನೀಗಿಸಬಹುದು ಎಂದು ಜಿಲ್ಲಾ ವೆನ್ಲಾಕ್ ಆಸ್ಪತ್ರೆಯ ಬ್ಲಡ್‍ಬ್ಯಾಂಕಿನ ವೈದ್ಯ ಡಾ. ಗಗನ್ ಪೈ ಹೇಳಿದರು.

ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್‍ಟೌನ್, ಜಿಲ್ಲಾ ವೆನ್ಲಾಕ್ ಆಸ್ಪತ್ರೆ ಆಶ್ರಯದಲ್ಲಿ ತ್ರಿಭುವನ್ ಜೇಸಿಸ್ ಹಾಗೂ ಆಟೋರಿಕ್ಷಾ ಚಾಲಕ ಮಾಲಕರ ಸಂಘದ ಆಶ್ರಯದಲ್ಲಿ ಸಮಾಜಮಂದಿರದಲ್ಲಿ ಭಾನುವಾರ ನಡೆದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರೋಟರಿ ಕ್ಲಬ್ ಟೆಂಪಲ್‍ಟೌನ್‍ನ ಅಧ್ಯಕ್ಷ ಡಾ. ಮಹಾವೀರ ಜೈನ್ ಅಧ್ಯಕ್ಷತೆ ವಹಿಸಿದ್ದರು. ಝೋನಲ್ ಲೆಫ್ಟಿನೆಂಟ್ ಬಲರಾಮ್ ಕೆ. ಎಸ್., ತ್ರಿಭುವನ್ ಜೇಸಿಸ್‍ನ ಅಧ್ಯಕ್ಷ ಸಂತೋಷ್ ಕುಮಾರ್, ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ರಾಜೇಶ್ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ರಿಕ್ಷಾ ಚಾಲಕ ಕೊಡಂಗಲ್ಲಿನ ಸುಧಾಕರ ಅವರಿಗೆ ನೆರವಿನ ಚೆಕ್‍ನ್ನು ಹಸ್ತಾಂತರಿಸಲಾಯಿತು. ನೂತನ ಅಧ್ಯಕ್ಷ ಬಿ. ಸೀತಾರಾಮ ಆಚಾರ್ಯ ಸ್ವಾಗತಿಸಿದರು. ಕಾರ್ಯದರ್ಶಿ ಪೂರ್ಣಚಂದ್ರ ಜೈನ್ ವಂದಿಸಿದರು. ಹರೀಶ್ ಎಂ. ಕೆ. ಕಾರ್ಯಕ್ರಮ ನಿರ್ವಹಿಸಿದರು.