Call Us Now: 08272 221717

ಮೂಡುಬಿದಿರೆ ರೋಟರಿ ಟೆಂಪಲ್‌ಟೌನ್‌ಗೆ 26 ಪ್ರಶಸ್ತಿಗಳು

July 7, 2020

ಮೂಡುಬಿದಿರೆ: ರೋಟರಿ ಜಿಲ್ಲೆ 3181 ವಲಯ 4ರ ವ್ಯಾಪ್ತಿಯಲ್ಲಿ ಬರುವ ಮಧ್ಯಮ ವರ್ಗದ ಕ್ಲಬ್‌ಗಳ 2019-20ಸಾಲಿನಲ್ಲಿ ನಡೆದಿರುವ ಸಮಾಜಮುಖಿ ಕಾರ್ಯಕ್ರಮಗಳ ಮೌಲ್ಯಮಾಪನದಲ್ಲಿ ಮೂಡುಬಿದಿರೆ ರೋಟರಿ ಕ್ಲಬ್ ಟೆಂಪಲ್‌ಟೌನ್ 26 ಪ್ರಶಸ್ತಿಗಳನ್ನು ಗಳಿಸುವ ಮೂಲಕ ಅಗ್ರಸ್ಥಾನ ಪಡೆದಿದೆ.
ಬಂಟ್ವಾಳದಲ್ಲಿ ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ರೋಟರಿ ಜಿಲ್ಲಾ ರಾಜ್ಯಪಾಲ ಜೋಸೆಫ್ ಮ್ಯಾಥ್ಯೂ ಅವರಿಂದ ಕ್ಲಬ್‌ನ ಅಧ್ಯಕ್ಷ ಡಾ.ಮಹಾವೀರ ಜೈನ್ ಹಾಗೂ ಕಾರ್ಯದರ್ಶಿ ಹರೀಶ್ ಎಂ.ಕೆ. ಸ್ವೀಕರಿಸಿದರು.

ರೋಟರಿ ಜಿಲ್ಲಾ ರಾಜ್ಯಪಾಲ ರಿತೇಶ್ ಬಾಳಿಗಾ ಉಪಸ್ಥಿತರಿದ್ದರು. ವೇಣೂರಿನಲ್ಲಿ ಮನೆಗೆ ಶೌಚಾಲಯ, ಮೂರು ಮನೆಗಳಿಗೆ ಸೋಲಾರ್, 6 ಪ್ರೌಢಶಾಲೆಗಳಿಗೆ 15ಕಂಪ್ಯೂಟರ್, ರೋಟರಿ ಟೆಂಪಲ್‌ಟೌನ್ ಪಾರ್ಕ್ ಅಭಿವೃದ್ಧಿ, ಶಾಲೆಗಳಿಗೆ ಪೈಂಟಿಂಗ್, ಬೃಹತ್ ಸ್ವಚ್ಛತಾ ಅಭಿಯಾನ, ಸಾಂಸ್ಕೃತಿಕೋತ್ಸವ ಸಹಿತ ಹಲವಾರು ಸೇವಾ ಕಾರ್ಯಗಳನ್ನು ನಡೆಸಿತ್ತು.