Call Us Now: 08272 221717

ಪಾಲಡ್ಕ ವೃದ್ಧ ದಂಪತಿಗೆ ಸೂರು: ಸ್ಪೂರ್ತಿ ಸಂಸ್ಥೆಗೆ ಸಾಥ್ ನೀಡಿದ ಬಂಗ್ಲೆ ಫ್ರೆಂಡ್ಸ್

July 20, 2020

ಮೂಡುಬಿದಿರೆ: 50 ಹೆಚ್ಚು ಭಿನ್ನ ಸಾಮರ್ಥ್ಯ ಮಕ್ಕಳಿಗೆ ಮೂಡುಬಿದಿರೆಯಲ್ಲಿ ಉಚಿತ ಶಿಕ್ಷಣ ಹಾಗೂ ತರಬೇತಿ ನೀಡುತ್ತಿರುವ ಸ್ಪೂರ್ತಿ ಸಂಸ್ಥೆಯು ಪಾಲಡ್ಕದ ವೃದ್ಧ ದಂಪತಿಗೆ ಮನೆ ಕಟ್ಟಿಕೊಡುತ್ತಿದೆ. ಹಲವು ಸಂಘ ಸಂಸ್ಥೆಗಳು ಸ್ಪೂರ್ತಿ ಸಂಸ್ಥೆಯ ಸಹಕಾರ ನೀಡಿದ್ದು, ಬೆಳುವಾಯಿಯ ಬಂಗ್ಲೆ ಫ್ರೆಂಡ್ಸ್ ಕೂಡ ಸಾಥ್ ನೀಡಿದೆ.

ಪಾಲಡ್ಕ ಗ್ರಾಮದ ಕೇಮಾರು ಹೋಂಡೆಲುವಿನ ಅಸಹಾಯಕ ವ್ರದ್ದ ದಂಪತಿಗಳಾದ ಸುಶೀಲ -ದೂಜ ಪೂಜಾರಿಯವರಿಗೆ ಹೊಸ ಸೂರು ಕಲ್ಪಿಸುವ ಕೆಲಸಕ್ಕೆ ಜಾನ್ ಡಿಸೋಜ ನೇತ್ರತ್ವದಲ್ಲಿ ಬಂಗ್ಲೆ ಫ್ರೆಂಡ್ಸ್‌ ಬೆಳುವಾಯಿ ತಂಡದ 16 ಜನ ಸೇರಿಕೊಂಡು ಶ್ರಮದಾನ ಮಾಡುವ ಮೂಲಕ ಸ್ಪೂರ್ತಿ ವಿಶೇಷ ಮಕ್ಕಳ ಶಾಲೆಯ ಸಂಸ್ಥೆಯ ಜೊತೆ ಕೈಜೋಡಿಸಿದ್ದಾರೆ.