Call Us Now: 08272 221717

ಮೂಡುಬಿದಿರೆ: ಜವುಳಿ ವರ್ತಕರಿಂದ ಹಾಫ್ ಡೇ ನಿರ್ಧಾರ

July 4, 2020

ಮೂಡುಬಿದಿರೆ: ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಎಲ್ಲೆಡೆ ವ್ಯಾಪಕವಾಗಿ ಹಬ್ಬುತ್ತಿರುವ ಕೊರೋನಾ ಮಹಾಮಾರಿಯ ನಿಯಂತ್ರಣಕ್ಕೆ ಪೂರಕವಾಗಿ ಬರುವ ಜುಲೈ ೬ರಿಂದ ಅರ್ಧ ದಿನ ಮಾತ್ರ ವ್ಯಾಪಾರ ಚಟುವಟಿಕೆಗಳನ್ನು ನಡೆಸುವುದಾಗಿ ಮೂಡುಬಿದಿರೆಯ ಜವುಳಿ ವರ್ತಕರು ನಿರ್ಧರಿಸಿದ್ದಾರೆ.

ಇದೊಂದು ಸ್ವಯಂಪ್ರೇರಿತ ನಿರ್ಧಾರವಾಗಿದ್ದು ಅಪರಾಹ್ನ 2 ಗಂಟೆಯ ಮೂಡುಬಿದಿರೆಯಲ್ಲಿಎಲ್ಲ ಜವುಳಿ ಅಂಗಡಿಗಳು ಮುಚ್ಚಿಕೊಳ್ಳುವಂತೆ ಶುಕ್ರವಾರ ಸಮಾಜ ಮಂದಿರದಲ್ಲಿ ನಡೆದ ಸಂಘದ ತುರ್ತು ಸಭೆಯಲ್ಲಿ ನಿರ್ಧರಿಸಲಾಯಿತು.ಸರಕಾರದ ಕರ್ಫ್ಯೂ ಇರುವುದರಿಂದ ರವಿವಾರವೂ ಮಳಿಗೆಗಳು ತೆರೆದಿರುವುದಿಲ್ಲ ಎಂದು ಸಂಘದ ಅಧ್ಯಕ್ಷ ಆರ್.ರವೀಂದ್ರ ಪೈ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.